Colossians 1

ಪೀಠಿಕೆ

1
1:1 1 ಕೊರಿ 1:1
ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ
1:1 2 ಕೊರಿ 1:1
ಅಪೊಸ್ತಲನಾಗಿರುವ ಪೌಲನೂ ಮತ್ತು
1:1 2 ಕೊರಿ 1:1; ಕೊಲೊ 1:1; ಫಿಲೆ. 1; ಇಬ್ರಿ. 13:23
ಸಹೋದರನಾದ ತಿಮೊಥೆಯನು,
2ಕೊಲೊಸ್ಸೆಯಲ್ಲಿರುವ
1:2 ಎಫೆ. 1:1; ಫಿಲಿ. 1:1
ದೇವಜನರಿಗೆ ಹಾಗು ಕ್ರಿಸ್ತನಲ್ಲಿ
1:2 ನಂಬುವವರಾದ
ನಂಬಿಗಸ್ತರಾದ ಸಹೋದರರಿಗೆ ಬರೆಯುವುದೇನೆಂದರೆ,
1:2 ರೋಮಾ. 1:7; ಎಫೆ. 1:2
ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಮತ್ತು ಶಾಂತಿಯೂ ಉಂಟಾಗಲಿ.

ಕೃತಜ್ಞತಾಸ್ತುತಿ ಮತ್ತು ಪ್ರಾರ್ಥನೆ

3ನಿಮಗೋಸ್ಕರ
1:3 ಎಫೆ. 1:15, 16; ಫಿಲಿ. 4:5
ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ನಿಮಿತ್ತವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾಗಿರುವ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.

4ನೀವು ಕ್ರಿಸ್ತಯೇಸುವಿನಲ್ಲಿ ಇಟ್ಟಿರುವ ನಂಬಿಕೆ ಹಾಗು ದೇವಜನರೆಲ್ಲರಲ್ಲಿ ನೀವು ಇಟ್ಟಿರುವ ಪ್ರೀತಿಯ ಬಗ್ಗೆ ನಾವು ಕೇಳಿದ್ದೇವೆ. 5
1:5 2 ತಿಮೊ. 4:8; 1 ಪೇತ್ರ. 1:4; ಕೊಲೊ. 1:23; ಅ. ಕೃ. 23:6
ಪರಲೋಕದಲ್ಲಿ ನಿಮಗೋಸ್ಕರ ಕಾದಿರಿಸಿರುವ ನಿರೀಕ್ಷೆಯನ್ನು ಕುರಿತು ಸುವಾರ್ತೆಯ ಸತ್ಯವಾಕ್ಯದಿಂದ ನೀವು ಮೊದಲೇ ಕೇಳಿದ್ದಿರಿ.
6ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳಿದುಕೊಂಡ ದಿವಸದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ನಿಮ್ಮಲ್ಲಿ
1:6 ಯೋಹಾ. 15:5-16; ಫಿಲಿ. 1:11
ಫಲಕೊಟ್ಟಂತೆ
1:6 ಕೊಲೊ. 1:23; ಕೀರ್ತ 98:3; ಮತ್ತಾ 24:14
ಲೋಕದಲ್ಲೆಲ್ಲಾ ಫಲಕೊಟ್ಟು ವೃದ್ಧಿಯಾಗುತ್ತಿದೆ.

7ಈ ಸುವಾರ್ತೆಯನ್ನು ಕ್ರಿಸ್ತನ ನಂಬಿಗಸ್ತ ಸೇವಕನೂ, ನಮ್ಮ ಪ್ರಿಯ ಜೊತೆಸೇವಕನೂ ಆದ
1:7 ಕೊಲೊ. 4:12; ಫಿಲೆ. 23
ಎಪಫ್ರನಿಂದ ನೀವು ಕಲಿತುಕೊಂಡಿದ್ದೀರಿ.
8
1:8 ರೋಮಾ. 15:30
ಪವಿತ್ರಾತ್ಮಪ್ರೇರಿತವಾದ ನಿಮ್ಮ ಪ್ರೀತಿಯ ವಿಷಯವನ್ನು ನನಗೆ ತಿಳಿಸಿದವನು ಆತನೇ.

9ಹೀಗಿರುವುದ್ದರಿಂದ ಈ ನಿಮ್ಮ ಪ್ರೀತಿಯ ಕುರಿತು ನಾವು ಕೇಳಿದ ದಿನದಿಂದ ನಿಮಗೋಸ್ಕರ
1:9 2 ಥೆಸ. 1:11
ಪ್ರಾರ್ಥಿಸುವುದನ್ನು ನಿಲ್ಲಿಸದೆ, ನೀವು ಸಕಲ ಆತ್ಮಿಕ ಗ್ರಹಿಕೆಯಿಂದಲೂ
1:9 ಕೊಲೊ. 4:5; ಎಫೆ. 1:8
ಜ್ಞಾನದಿಂದಲೂ ದೇವರ ಚಿತ್ತದ ತಿಳುವಳಿಕೆಯ ಕುರಿತು ಸಂಪೂರ್ಣರಾಗಬೇಕೆಂತಲೂ,
10
1:10 ಎಫೆ. 1:17
ಕರ್ತನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ನೀವು ಯೋಗ್ಯರಾಗಿ ಜೀವಿಸಬೇಕೆಂತಲೂ,
1:10 2 ಕೊರಿ. 5:9; ಎಫೆ. 5:10
ಸಕಲ ಸತ್ಕಾರ್ಯಗಳಲ್ಲಿ
1:10 ಎಫೆ. 4:1
ಫಲವನ್ನು ಕೊಡುತ್ತಾ ದೈವಜ್ಞಾನದಲ್ಲಿ ವೃದ್ಧಿಯಾಗಬೇಕೆಂತಲೂ,

11
1:11 ಎಫೆ. 3:6,17
ಆತನ ಮಹಿಮಾ ಶಕ್ತಿಯ ಪ್ರಕಾರ ಎಲ್ಲಾ ಸಾಮರ್ಥ್ಯದಲ್ಲಿ ಬಲಹೊಂದಿ, ಎಲ್ಲವನ್ನೂ
1:11 ಎಫೆ. 4:2
ತಾಳ್ಮೆಯಿಂದಲೂ, ದೀರ್ಘಶಾಂತಿಯಿಂದಲೂ ಸಹಿಸಿಕೊಳ್ಳುವವರಾಗಿರಬೇಕೆಂತಲೂ,
12ದೇವಭಕ್ತರಿಗಾಗಿ
1:12 ಅ. ಕೃ. 26:18
ಬೆಳಕಿನಲ್ಲಿರುವ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಯಾದ ದೇವರಿಗೆ ಆನಂದಪೂರ್ವಕವಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸುವವರಾಗಬೇಕೆಂತಲೂ ದೇವರನ್ನು ಬೇಡಿಕೊಳ್ಳುತ್ತೇನೆ.

13ದೇವರು ನಮ್ಮನ್ನು
1:13 ಲೂಕ 22:53; ಎಫೆ. 6:12
ಅಂಧಕಾರದ ಅಧಿಪತ್ಯದಿಂದ ಬಿಡಿಸಿ ತನ್ನ
1:13 ಎಫೆ. 1:6
ಪ್ರಿಯ ಕುಮಾರನ
1:13 2 ಪೇತ್ರ. 1:11
ಸಾಮ್ರಾಜ್ಯಕ್ಕೆ ಸೇರಿಸಿದನು.
14
1:14 ಎಫೆ. 1:7
ಈ ಕುಮಾರನಲ್ಲಿ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ನಮಗೆ ವಿಮೋಚನೆಯಾಯಿತು.

ಕ್ರಿಸ್ತನ ಉತ್ಕೃಷ್ಟತೆ

15ಕ್ರಿಸ್ತನು
1:15 1 ತಿಮೊ 1:17
ಅದೃಶ್ಯನಾದ ದೇವರ
1:15 2 ಕೊರಿ. 4:4
ಪ್ರತಿರೂಪನೂ, ಸೃಷ್ಟಿಗೆಲ್ಲಾ
1:15 ಕೀರ್ತ 89:27; ಜ್ಞಾ. 8:24-31; ರೋಮಾ. 8:29 ಸೃಷ್ಟಿಗೆಲ್ಲಾ ಶ್ರೇಷ್ಠನೂ ಆಗಿದ್ದಾನೆ.
ಜೇಷ್ಠಪುತ್ರನೂ ಆಗಿದ್ದಾನೆ.
16ಭೂಪರಲೋಕಗಳಲ್ಲಿರುವ ದೃಶ್ಯ ಅದೃಶ್ಯವಾದವುಗಳೆಲ್ಲವೂ, ಸಿಂಹಾಸನಗಳಾಗಲಿ,
1:16 ಎಫೆ. 1:21
ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಆತನಿಂದ ಸೃಷ್ಟಿಸಲ್ಪಟ್ಟವು.
1:16 ಯೋಹಾ. 1:3; ರೋಮಾ. 11:36; 1 ಕೊರಿ. 8:6
ಸರ್ವವೂ ಆತನ ಮುಖಾಂತರವಾಗಿ ಆತನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಿತು.
17
1:17 ಯೋಹಾ. 1:1; 8:58
ಆತನು ಎಲ್ಲಕ್ಕೂ ಮೊದಲು ಇದ್ದಾತನು, ಆತನಲ್ಲಿ ಸಮಸ್ತವು ಒಂದಾಗಿ ನೆಲೆಗೊಂಡಿದ್ದೆ.

18
1:18 ಎಫೆ. 1:2-23
ಸಭೆಯೆಂಬ ದೇಹಕ್ಕೆ ಆತನು ತಲೆಯಾಗಿದ್ದಾನೆ,
1:18 ಪ್ರಕ. 3:14
ಆತನೇ ಆದಿಸಂಭೂತನು, ಎಲ್ಲಾದರಲ್ಲಿ ಆತನು ಮೊದಲಿಗನಾಗುವುದಕ್ಕಾಗಿ ಸತ್ತವರೊಳಗಿಂದ
1:18 ಅ. ಕೃ. 26:23; 1 ಕೊರಿ. 15:20; ಪ್ರಕ. 1:5
ಮೊದಲು ಎದ್ದು ಬಂದವನು ಆತನೇ.
19ಏಕೆಂದರೆ
1:19 ಕೊಲೊ. 2:9; ಯೋಹಾ. 1:16; ಎಫೆ. 1:23
ಆತನಲ್ಲಿಯೇ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ,
20ಮತ್ತು ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ
1:20 ಎಫೆ. 2:14
ತಾನು ಸಮಾಧಾನವನ್ನುಂಟುಮಾಡಿ,
1:20 2 ಕೊರಿ. 5:18; ಎಫೆ. 1:10
ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ತನ್ನ ಕುಮಾರನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ತಂದೆಯಾದ ದೇವರು ಇಚ್ಛಿಸಿದನು.

21ಇದಲ್ಲದೆ
1:21 ಎಫೆ. 2:12,21
ನೀವು ಪೂರ್ವದಲ್ಲಿ ಅನ್ಯರು ನಿಮ್ಮ
1:21 ತೀತ 1:16
ದುಷ್ಕೃತ್ಯಗಳಿಂದಲೂ ದ್ವೇಷಮನಸ್ಸುಳ್ಳವರಾಗಿ ಆತನಿಗೆ ವಿರೋಧಿಗಳೂ ಆಗಿದ್ದಿರಿ.
22ಈಗಲಾದರೋ ದೇವರು ನಿಮ್ಮನ್ನು
1:22 ರೋಮಾ. 7:4
ಯೇಸುಕ್ರಿಸ್ತನ ಶಾರೀರಿಕ ಮರಣದ ಮೂಲಕವಾಗಿ ಸಂಧಾನಪಡಿಸಿಕೊಂಡಿದ್ದಾನೆ. ದೇವರು ತನ್ನ ಸನ್ನಿಧಿಯಲ್ಲಿ ನಿಮ್ಮನ್ನು ಪರಿಶುದ್ಧರನ್ನಾಗಿಯೂ, ನಿರ್ದೋಷಿಗಳನ್ನಾಗಿಯೂ,
1:22 1 ಕೊರಿ. 1:8
ನಿರಪರಾಧಿಗಳನ್ನಾಗಿಯೂ
1:22 ಯೂದ. 24; ಎಫೆ. 5:27
ನಿಲ್ಲಿಸಬೇಕೆಂದು ಹೀಗೆ ಮಾಡಿದ್ದಾನೆ.
23
1:23 ಮಾರ್ಕ 16:15; ಅ. ಕೃ. 2:5
ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೂ ಸಾರಲ್ಪಟ್ಟಂತಹ ಮತ್ತು ನೀವು ಕೇಳಿದಂತಹ ಸುವಾರ್ತೆಯಿಂದ ಉಂಟಾದ
1:23 ಕೊಲೊ. 1:5,6
ನಿರೀಕ್ಷೆಯಿಂದ ಕದಲಿಹೋಗದಂತೆ ನಂಬಿಕೆಯಲ್ಲಿ ನೆಲೆಗೊಳ್ಳುವುದಾದರೆ, ನೀವು ಅಡಿಪಾಯವುಳ್ಳವರೂ ಮತ್ತು ಸ್ಥಿರತೆಯುಳ್ಳವರೂ ಆಗುವಿರಿ. ಇದೇ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾಗಿದ್ದೇನೆ.

ಸಭೆಗಾಗಿ ಪೌಲನ ಸೇವೆ

24ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ.
1:24 2 ಕೊರಿ. 1:5; 2 ತಿಮೊ. 1:8; 2:10
ಕ್ರಿಸ್ತನ
1:24 ಹಿಂಸೆ
ಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ
1:24 ಎಫೆ. 4:12
ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ.
25ದೇವರ ಸಂಕಲ್ಪದ ಮೇರೆಗೆ ನಿಮ್ಮ ಪ್ರಯೋಜನಕ್ಕೋಸ್ಕರವಾಗಿ
1:25 ವ. 24 ನೋಡಿರಿ.
ನಾನು ಸಭೆಗೆ ಸೇವಕನಾದೆನು.
1:25 ಎಫೆ. 3:2
ದೇವರು ತನ್ನ ವಾಕ್ಯವನ್ನು ಸಂಪೂರ್ಣವಾಗಿ ತಿಳಿಸುವ ಕಾರ್ಯವನ್ನು ನನಗೆ ದಯಪಾಲಿಸಿದನು.
26
1:26 ಎಫೆ. 3:9; ರೋಮಾ. 16:25-26
ಈ ರಹಸ್ಯವಾದ ಸತ್ಯವಾಕ್ಯವು ಹಿಂದಿನ ಯುಗಯುಗಗಳಿಂದಲೂ, ತಲತಲಾಂತರಗಳಿಂದಲೂ ಮರೆಯಾಗಿತ್ತು, ಆದರೆ ಈಗ ದೇವರು ಅದನ್ನು ತನ್ನ ದೇವಜನರಿಗೆ ಪ್ರಕಟಿಸಿದ್ದಾನೆ.
27
1:27 ಎಫೆ. 1:18; 3:16-17
ಈ ಮರ್ಮದ ಮಹಿಮಾತಿಶಯವು ಎಷ್ಟೆಂಬುದನ್ನು
1:27 ಕೊಲೊ. 2:2
ಅನ್ಯಜನಗಳಿಗೂ ತಿಳಿಸಲಿಕ್ಕೆ ದೇವರು ಇಚ್ಛಿಸಿದನು. ಈ ಮರ್ಮವು ಏನೆಂದರೆ ಮಹಿಮೆಯ ನಿರೀಕ್ಷೆಗೆ ಆಧಾರನಾಗಿರುವ
1:27 1 ತಿಮೊ. 1:1;
ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದೇ.

28ನಾವು ಆತನನ್ನು ಸಾರುತ್ತಲಿದ್ದೇವೆ, ಸಕಲರಿಗೂ ಬುದ್ಧಿ ಹೇಳುತ್ತಾ, ಸರ್ವರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ, ದೇವರ ಮುಂದೆ ಎಲ್ಲರನ್ನೂ ಕ್ರಿಸ್ತನಲ್ಲಿ
1:28 ಮತ್ತಾ 5:48
ಪ್ರವೀಣರನ್ನಾಗಿ
1:28 ವ. 22 ನೋಡಿರಿ.
ನಿಲ್ಲಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ.
1:29 ಎಫೆ. 1:19
ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲದಿಂದ ಇದಕ್ಕೊಸ್ಕರವೇ ಶ್ರಮಿಸಿ
1:29 ಕೊಲೊ. 2:1; 4:12
ಹೋರಾಡುತ್ತೇನೆ.

29

Copyright information for KanULB